ಅಯ್ಯೋ ಎಲ್ಲಿ ಟ್ಯಾಕ್ಸ್ ಉಳಿಸೋದಪ್ಪಾ? ಪ್ರತಿ ವರ್ಷ ಈ ಇನ್ ಕಮ್ ಟ್ಯಾಕ್ಸ್ ದೇ ದೊಡ್ಡ ತಲೆನೋವು ಅಂತ ವೇತನದಾರರು ಅಲವತ್ತುಕೊಳ್ತಿರ್ತಾರೆ. ಹೀಗೆ ತೆರಿಗೆ ಉಳಿಸೋ ಪ್ರಯತ್ನದಲ್ಲಿರುವವರಿಗೆ ಮಾರ್ಚ್ 31, 2020 ಡೆಡ್ ಲೈನ್. ಹೌದು ಇಲ್ಲಿಯ ತನಕ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡೋಕೆ ಎಷ್ಟು ಪ್ಲಾನ್ ಮಾಡಿದ್ದೀರೋ ಗೊತ್ತಿಲ್ಲ. ಆದರೆ ಇನ್ನುಳಿದಿರೋ ಕೆಲ ದಿನಗಳಲ್ಲಿ ಕಾರ್ಯಪ್ರವೃತ್ತರಾಗಿ ಹೂಡಿಕೆ ಮಾಡಿದ್ರೂ ತೆರಿಗೆ ಉಳಿಸೋ ಸರ್ಕಸ್ ನಲ್ಲಿ ನೀವು ಸಫಲರಾಗಬಹುದು.
ತೆರಿಗೆಗೆ ಒಳಪಡುವ ಆದಾಯವೆಷ್ಟು ಅರಿಯಿರಿ: ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವೆಷ್ಟು? ಇದನ್ನು ಅರಿಯುವುದರೊಂದಿಗೆ ತೆರಿಗೆ ಉಳಿಸುವ ಪ್ರಕ್ರಿಯೆ ಆರಂಭಿಸಬಹುದು. (ಪಟ್ಟಿ ಗಮನಿಸಿ)
ಆದಾಯ ತೆರಿಗೆ ಮಿತಿಗಳು 2019-20 |
|||||
ಸಾಮಾನ್ಯ ನಾಗರಿಕರಿಗೆ (60 ವರ್ಷ ಒಳಪಟ್ಟು) |
ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ರ ಒಳಪಟ್ಟು) |
ಅತ್ಯಂತ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟು) |
|||
ತೆರಿಗೆ ಸ್ಲ್ಯಾಬ್ ಗಳು |
ತೆರಿಗೆ ಪ್ರಮಾಣ |
ತೆರಿಗೆ ಸ್ಲ್ಯಾಬ್ ಗಳು |
ತೆರಿಗೆ ಪ್ರಮಾಣ |
ತೆರಿಗೆ ಸ್ಲ್ಯಾಬ್ ಗಳು |
ತೆರಿಗೆ ಪ್ರಮಾಣ |
2.5 ಲಕ್ಷದ ವರೆಗಿನ ಆದಾಯ |
ತೆರಿಗೆ ಇಲ್ಲ |
3 ಲಕ್ಷದ ವರೆಗಿನ ಆದಾಯ |
ತೆರಿಗೆ ಇಲ್ಲ |
5 ಲಕ್ಷದ ವರೆಗಿನ ಆದಾಯ |
ತೆರಿಗೆ ಇಲ್ಲ |
2.5 ಲಕ್ಷದಿಂದ 5 ಲಕ್ಷ |
ಶೇ 5 |
3 ಲಕ್ಷದಿಂದ 5 ಲಕ್ಷ |
ಶೇ 5 |
5 ಲಕ್ಷದ ವರೆಗಿನ ಆದಾಯ |
ತೆರಿಗೆ ಇಲ್ಲ |
5 ಲಕ್ಷದಿಂದ 10 ಲಕ್ಷ |
ಶೇ 20 |
5 ಲಕ್ಷದಿಂದ 10 ಲಕ್ಷ |
ಶೇ 20 |
5 ಲಕ್ಷದಿಂದ 10 ಲಕ್ಷ |
ಶೇ 20 |
10 ಲಕ್ಷ ಮೇಲ್ಪಟ್ಟು |
ಶೇ 30 |
10 ಲಕ್ಷ ಮೇಲ್ಪಟ್ಟು |
ಶೇ 30 |
10 ಲಕ್ಷ ಮೇಲ್ಪಟ್ಟು |
ಶೇ 30 |
ರೂ. 5 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ : 5 ಲಕ್ಷದ ವರಗಿನ ಆದಾಯವಿರುವವರಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87(ಎ) ಅಡಿಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಆದರೆ ನಿಮ್ಮ ಆದಾಯ ರೂ. 5 ಲಕ್ಷದ ಒಳಿಗಿದೆ ಎಂದು ತೋರಿಸಲು ಐಟಿ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. |
ತೆರಿಗೆ ಉಳಿಸಲು ವೇತನದಾರರಿಗೆ ಟಾಪ್ 9 ಆಯ್ಕೆಗಳು |
|
ಹೂಡಿಕೆ ಸಾಧನ |
ತೆರಿಗೆ ಅನುಕೂಲ ಪಡೆಯಲು ಕನಿಷ್ಠ ಹೂಡಿಕೆ |
EPF (ಕಾರ್ಮಿಕರ ಭವಿಷ್ಯ ನಿಧಿ ) |
ವೇತನದ ಶೇ 12 ರಷ್ಟು (ಹೆಚ್ಚುವರಿ ಹೂಡಿಕೆಗೆ ತೆರಿಗೆ ವಿನಾಯಿತಿ ಲಭ್ಯ |
ELSS( ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ) |
ರೂ. 500 |
PPF ( ಸಾರ್ವಜನಿಕ ಭವಿಷ್ಯ ನಿಧಿ) |
ರೂ. 500 |
NPS (ರಾಷ್ಟ್ರೀಯ ಪಿಂಚಣಿ ಯೋಜನೆ) |
ರೂ. 1000 |
ಜೀವ ವಿಮೆ (ಲೈಫ್ ಇನ್ಶೂರೆನ್ಸ್) |
ಸಮ್ ಅಶೂರ್ಡ್ ಮೊತ್ತದ ಶೇ 10 ರಷ್ಟು |
ಸುಕನ್ಯಾ ಸಮೃದ್ಧಿ ( ಹೆಣ್ಣು ಮಕ್ಕಳಿದ್ದ ಪೋಷಕರಿಗೆ ಮಾತ್ರ ಅನ್ವಯ) |
ರೂ. 250 |
NSC (ರಾಷ್ಟ್ರೀಯ ಉಳಿತಾಯ ಪತ್ರ) |
ರೂ. 100 |
5 ವರ್ಷದ ಬ್ಯಾಂಕ್ ಅಥವಾ ಅಂಚೆ ಕಚೇರಿ ಫಿಕ್ಸೆಡ್ ಡೆಪಾಸಿಟ್ |
ರೂ. 100 |
SCSS ( ಹಿರಿಯ ನಾಗರಿಕರ ಉಳಿತಾಯ ಯೋಜನೆ) |
ರೂ. 1000 |
ನ್ಯಾಯಯುತವಾಗಿ ಗರಿಷ್ಠ ಆದಾಯ ತೆರಿಗೆ ಉಳಿಸುವುದು ಹೇಗೆ? 35 ವರ್ಷ ವಯಸ್ಸಿನ ನವೀನ್ ವಾರ್ಷಿಕವಾಗಿ ರೂ. 10 ಲಕ್ಷ ಆದಾಯ ಗಳಿಸುತ್ತಾರೆ. ಅವರು ಇಎಲ್ ಎಸ್ ಎಸ್ , ಪಿಪಿಎಫ್ ಮತ್ತು ಇನ್ಶೂರೆನ್ಸ್ ಸೇರಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷ ಉಳಿತಾಯ ಮಾಡುತ್ತಾರೆ. ನವೀನ್ ತಮಗೆ, ಮಡದಿ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಾಗಿರುವ ಪೋಷಕರಿಗೆ ಆರೋಗ್ಯ ವಿಮೆ ಪಡೆದುಕೊಂಡಿದ್ದಾರೆ. ಆರೋಗ್ಯ ವಿಮೆಗೆ ನವೀನ್ ವಾರ್ಷಿಕ 50 ಸಾವಿರ ಪ್ರೀಮಿಯಂ ಪಾವತಿಸುತ್ತಾರೆ. ಇದಕ್ಕಾಗಿ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಪಡೆದುಕೊಳ್ಳುತ್ತಾರೆ. ನವೀನ್ ಮಾಡಿರುವ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಯ ಮೇಲೆ ಸೆಕ್ಷನ್ 24 ಅಡಿಯಲ್ಲಿ ರೂ. 2 ಲಕ್ಷದ ವರೆಗೆ ವಿನಾಯಿತಿ ಲಭ್ಯ. ಇನ್ನು ಎನ್ ಪಿಎಸ್ ನಲ್ಲಿ ರೂ. 50 ಸಾವಿರ ಹೂಡಿಕೆ ಮಾಡಿ ಅವರು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ರೂ. 50 ಸಾವಿರ ವಿನಾಯಿತಿ ಪಡೆಯುತ್ತಾರೆ. 10 ಲಕ್ಷ ಆದಾಯವಿದ್ದರೂ ಸಹಿತ ಆದಾಯ ತೆರಿಗೆ ವಿನಾಯಿತಿ ಮತ್ತು ಇನ್ನಿತರ ನಿಯಮಗಳನ್ನು ಬಳಸಿಕೊಂಡು ನವೀನ್ ಶೂನ್ಯ ತೆರಿಗೆ ಪಾವತಿಸುತ್ತಾರೆ,
ನಿಮ್ಮ ಆದಾಯ ರೂ. 10 ಲಕ್ಷ ಇದ್ದರೂ ಗರಿಷ್ಠ ತೆರಿಗೆ ಉಳಿತಾಯ ಹೇಗೆ? |
|
ನವೀನ್ ಅವರ ಒಟ್ಟು ಆದಾಯ |
ರೂ. 10 ಲಕ್ಷ |
ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ |
ರೂ. 50 ಸಾವಿರ |
ಸ್ಟ್ಯಾಂಡರ್ಡ್ ಡಿಡಕ್ಷನ್ ನಂತರದ ಆದಾಯ |
ರೂ. 9.5 ಲಕ್ಷ |
ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ |
ರೂ. 1.5 ಲಕ್ಷ |
ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ |
ರೂ. 50 ಸಾವಿರ |
ಸೆಕ್ಷನ್ 24 ರ ಅಡಿಯಲ್ಲಿ ವಿನಾಯಿತಿ |
ರೂ. 2 ಲಕ್ಷ |
ಸೆಕ್ಷನ್ 80 ಸಿಸಿಡಿ(1ಬಿ) ಅಡಿಯಲ್ಲಿ ವಿನಾಯಿತಿ |
ರೂ. 50 ಸಾವಿರ |
ವಿನಾಯಿತಿ ಬಳಿಕ ತೆರಿಗೆಗೆ ಒಳಪಡುವ ಆದಾಯ |
ರೂ. 5 ಲಕ್ಷ |
ಒಟ್ಟು ತೆರಿಗೆ |
ರೂ. 12,500 |
ಸೆಕ್ಷನ್ 87 ಎ ಅಡಿಯಲ್ಲಿ ಸಿಗುವ ವಿನಾಯಿತಿ |
ರೂ. 12,500 |
ಪಾವತಿಸಬೇಕಿರು ನಿವ್ವಳ ತೆರಿಗೆ |
0 |
ತೆರಿಗೆ ಉಳಿಸುವ ಈ ಸೆಕ್ಷನ್ ಗಳು ನಿಮಗೆ ಗೊತ್ತೇ? |
|||
ವಿಭಾಗ |
ಸೆಕ್ಷನ್ |
ಉದ್ದೇಶ |
ತೆರಿಗೆ ವಿನಾಯಿತಿ ಲಭ್ಯತೆ |
ಆರೋಗ್ಯ |
80 ಡಿ |
ನಿಮಗೆ, ನಿಮ್ಮ ಕುಟುಂಬಕ್ಕೆ ಮತ್ತು ಪೋಷಕರ ಆರೋಗ್ಯ ವಿಮೆಗೆ |
ನಿಮಗೆ, ಪತ್ನಿ, ಮಕ್ಕಳಿಗೆ ಮಾಡಿಸುವ ವಿಮೆಗೆ ರೂ. 25 ಸಾವಿರದ ವರೆಗೆ ವಿನಾಯಿತಿ. ಹಿರಿಯ ನಾಗರಿಕರಾಗಿರುವ ಪೋಷಕರಿಗೆ ಇನ್ಶೂರೆನ್ಸ್ ಮಾಡಿಸಿದ್ದರೆ ರೂ. 50 ಸಾವಿರದ ವರೆಗೆ ವಿನಾಯಿತಿ |
80 ಡಿಡಿ |
ಶೇ 40 ಕ್ಕಿಂತ ಮೇಲ್ಪಟ್ಟು ಶೇ 80 ರಷ್ಟು ಒಳಪಟ್ಟು ಅಂಗವೈಕಲ್ಯತೆ ಹೊಂದಿರುವ ಪತ್ನಿ, ಪೋಷಕರು, ಮಕ್ಕಳು ಅಥವಾ ಹತ್ತಿರದ ರಕ್ತ ಸಂಬಂಧಿಯ ವೈದ್ಯಕೀಯ ಚಿಕಿತ್ಸೆಗೆ ಮಾಡುವ ಖರ್ಚಿಗೆ ವಿನಾಯಿತಿ |
ರೂ. 75 ಸಾವಿರ |
|
80 ಡಿಡಿಬಿ |
ನಿಮಗೆ ಅಥವಾ ಅವಲಂಬಿತರಿಗೆ ನಿರ್ದಿಷ್ಟ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರೆ ಸಿಗುವ ವಿನಾಯಿತಿ |
ರೂ. 40 ಸಾವಿರ (ಹಿರಿಯ ನಾಗರಿಕರಿಗೆ ರೂ.1 ಲಕ್ಷ) |
|
80 ಯು |
ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಗೆ |
ರೂ. 75 ಸಾವಿರ |
|
ತೀವ್ರ ತರಹದ ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಗೆ |
ರೂ. 1.25 ಲಕ್ಷ |
||
ಗೃಹ |
80 ಜಿಜಿ |
ವಾಸಕ್ಕಾಗಿ ಬಾಡಿಗೆಗೆ ಪಡೆದಿರುವ ಮನೆಗೆ ಸಿಗುವ ತೆರಿಗೆ ವಿನಾಯಿತಿ. ( ಈ ವಿನಾಯಿತಿ ಪಡೆಯಬೇಕಾದಲ್ಲಿ ವ್ಯಕ್ತಿಯು ಬಾಡಿಗೆ ಭತ್ಯೆ ( ಎಚ್ ಆರ್ ಎ) ಪಡೆಯುತ್ತಿರಬಾರದು ಮತ್ತು ವಾಸವಿರುವ ನಗರದಲ್ಲಿ ಸ್ವಂತ ಮನೆ ಹೊಂದಿರಬಾರದು |
ವಾರ್ಷಿಕ ರೂ. 60 ಸಾವಿರ ಅಥವಾ ಒಟ್ಟು ಆದಾಯದ ಶೇ 25 ರಷ್ಟು ಅಥವಾ ಹೆಚ್ಚುವರಿಯಾಗಿ ಪಾವತಿಸಿರುವ ಬಾಡಿಗೆ ಹಣಕ್ಕೆ, ನಿಮ್ಮ ಒಟ್ಟು ಆದಾಯದಲ್ಲಿ ಶೇ 10 ರಷ್ಟು ವಿನಾಯಿತಿ |
24 ಬಿ |
1999 ರ ಏಪ್ರಿಲ್ 1 ರ ನಂತರ ಗೃಹ ಸಾಲ ಪಡೆದು, ಮನೆ ಖರೀದಿಸಿ ವಾಸ ಮಾಡುತ್ತಿದ್ದಲ್ಲಿ ಆ ಸಾಲಕ್ಕೆ ಪಾವತಿಸುತ್ತಿರುವ ಬಡ್ಡಿ ಮೇಲೆ ವಿನಾಯಿತಿ ( 1999 ಕ್ಕೆ ಮೊದಲು ಮನೆ ಖರೀದಿಸಿದ್ದರೆ ರೂ. 30 ಸಾವಿರ ವಿನಾಯಿತಿ ಅನ್ವಯ) |
ರೂ. 2 ಲಕ್ಷ |
|
ಮನೆಯನ್ನು ಬಾಡಿಗೆಗೆ ನೀಡಿದ್ದ ಪಕ್ಷದಲ್ಲಿ |
ರೂ. 2 ಲಕ್ಷ |
||
ಶಿಕ್ಷಣ |
80 ಇ |
ನಿಮ್ಮ ಅಥವಾ ಪತ್ನಿ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರೆ ಇದು ಅನ್ವಯ. ಸಾಲ ಮರುಪಾವತಿ ಆರಂಭಿಸಿದ ವರ್ಷದಿಂದ 8 ವರ್ಷಗಳ ಅವಧಿಗೆ ತೆರಿಗೆ ವಿನಾಯಿತಿ ಪಡೆಯಬಹುದು. |
ಶಿಕ್ಷಣ ಸಾಲಕ್ಕೆ ನಿಗದಿತ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಡ್ಡಿಯ ಮೇಲೆ ಸಂಪೂರ್ಣ ವಿನಾಯಿತಿ ಲಭ್ಯ |
ಇತರೆ |
80 ಸಿಸಿಡಿ (1ಬಿ) |
ರಾಷ್ಟ್ರೀಯ ಪಿಂಚಣೆ ಯೋಜನೆ ( ಎನ್ ಪಿಎಸ್ ) ಯಲ್ಲಿ ಹಣ ತೊಡಗಿಸಿದರೆ ಹೆಚ್ಚುವರಿಯಾಗಿ ವಿನಾಯಿತಿ ಲಭ್ಯ |
ರೂ. 50 ಸಾವಿರ |
80 ಟಿಟಿಎ |
ಉಳಿತಾಯ ಖಾತೆಯಲ್ಲಿ ಪಡೆದಿರುವ ಬಡ್ಡಿ |
ರೂ. 40 ಸಾವಿರ |
|
80 ಟಿಟಿಬಿ |
ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವ ಬಡ್ಡಿ |
ರೂ. 50 ಸಾವಿರ |
|
80 ಜಿಜಿಸಿ |
ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆ |
ಶೇ. 100 ರಷ್ಟು |
|
80 ಜಿ |
ನಿರ್ದಿಷ್ಟ ಸಂಘ ಸಂಸ್ಥೆಗಳಿಗೆ ನೀಡುವ ದೇಣಿಗೆ |
ಶೇ 50- 100 ರಷ್ಟು ( ಸಂಸ್ಥೆ ಆಧರಿಸಿ) |
|
80 ಜಿಜಿಎ |
ವೈಜ್ಞಾನಿಕ ಸಂಶೋಧನೆಗೆ ನೀಡುವ ದೇಣಿಗೆ |
ಶೇ. 100 ರಷ್ಟು |
|
80 ಇಇಬಿ |
ಇಲೆಕ್ಟ್ರಿಕ್ ವಾಹನ ದ ಮೇಲೆ ಸಾಲ ಪಡೆದು ಅದಕ್ಕೆ ಪಾವತಿಸುವ ಸಾಲದ ಮೇಲಿನ ಬಡ್ಡಿಗೆ ವಿನಾಯಿತಿ ಸಿಗಲಿದೆ. ಏಪ್ರಿಲ್ 1 , 2019 ರಿಂದ ಮಾರ್ಚ್ 2023 ರ ವರೆಗೆ ಈ ನಿಯಮ ಅನ್ವಯ.
|
ರೂ. 1.5 ಲಕ್ಷದ ವರೆಗೆ ವಿನಾಯಿತಿ |
This is to inform that Suvision Holdings Pvt Ltd ("IndianMoney.com") do not charge any fees/security deposit/advances towards outsourcing any of its activities. All stake holders are cautioned against any such fraud.