alexa

Search in Indianmoney's WealthPedia

Home Articles ಅವಧಿಪೂರ್ವ ಗೃಹ ಸಾಲ ಪಾವತಿ ಲಾಭದಾಯಕವೇ?

ಅವಧಿಪೂರ್ವ ಗೃಹ ಸಾಲ ಪಾವತಿ ಲಾಭದಾಯಕವೇ?

IndianMoney.com Research Team | Posted On Monday, November 30,-0001, 12:00 AM

ಅವಧಿಪೂರ್ವ ಗೃಹ ಸಾಲ ಪಾವತಿ ಲಾಭದಾಯಕವೇ?

 

 

ಅವಧಿಪೂರ್ವ ಗೃಹ ಸಾಲ ಪಾವತಿ ಲಾಭದಾಯಕವೇ?

1)    ನನ್ನ ಹೆಸರು ಪೂರ್ಣಿಮಾ ಕಮ್ಮಜೆ. ನಾನು 15 ವರ್ಷಗಳ ಅವಧಿಗೆ 20 ಲಕ್ಷ ರೂ.ಗಳನ್ನು ಗೃಹ ಸಾಲವನ್ನಾಗಿ ಪಡೆದಿದ್ದೇನೆ.  2018 ರ ನವೆಂಬರ್ ನಿಂದ ಪ್ರತಿ ತಿಂಗಳು 22,000 ರೂ.ಗಳನ್ನು ಮಾಸಿಕ ಕಂತಿನ ( ಇಎಂಐ) ಆಧಾರದಲ್ಲಿ ಪಾವತಿಸುತ್ತಿದ್ದೇನೆ. ನಾನು ಹೆಚ್ಚುವರಿಯಾಗಿ ಹಣ ಸಿಕ್ಕಾಗ  1 ಅಥವಾ 2 ಲಕ್ಷ ರೂಗಳನ್ನು ಅವಧಿ ಪೂರ್ವದಲ್ಲಿ ಪಾವತಿಸಿದರೆ ನನಗೆ ಅನುಕೂಲವಾಗುವುದೇ?

 ಪೂರ್ಣಿಮಾ ಕಮ್ಮಜೆ ಅವರೆ ಬಹಳಷ್ಟು ಜನರಿಗೆ ಉಪಯುಕ್ತವಾಗುವ ಪ್ರಶ್ನೆ ಕೇಳಿದ್ದಕ್ಕೆ ನಿಮಗೆ ಧನ್ಯವಾದ.  ಅವಧಿಗೆ ಮುನ್ನ ಗೃಹ  ಸಾಲ ಮರುಪಾವತಿ ಮಾಡಿದರೆ ಖಂಡಿತವಾಗಿಯೂ ನಿಮಗೆ ಲಾಭವಾಗುತ್ತದೆ. ಅವಧಿಗೆ ಮುನ್ನ ಗೃಹ ಸಾಲಕ್ಕೆ ಹೆಚ್ಚುವರಿ ಕಂತುಗಳನ್ನು ಪಾವತಿಸಿದಾಗ ಬಡ್ಡಿ ಉಳಿತಾಯವಾಗುವ ಜತೆಗೆ ಮಾಸಿಕ ಕಂತುಗಳ ಸಂಖ್ಯೆಯೂ ತಗ್ಗುತ್ತದೆ. ಈ ಮೊದಲು ಬ್ಯಾಂಕ್ ಗಳು ಗೃಹ ಸಾಲದ ಅವಧಿಪೂರ್ವ ಮರುವಾವತಿಗೆ  ಸಾಲದ ಅಸಲಿನ ಮೊತ್ತದ ಶೇ 5 ರಷ್ಟು ಶುಲ್ಕವನ್ನು ಪಡೆದುಕೊಳ್ಳುತ್ತಿದ್ದವು. ಆದರೆ 2014 ರ ನಂತರದಲ್ಲಿ  ಪ್ಲೋಟಿಂಗ್ ಇಂಟರೆಸ್ಟ್ ರೇಟ್ ( ಕಾಲ ಕಾಲಕ್ಕೆ ಬದಲಾಗುವ ಬಡ್ಡಿ ದರ)  ಅಡಿಯಲ್ಲಿ ಯಾರು ಸಾಲ ಪಡೆದುರುತ್ತಾರೋ ಅವರು ಅವಧಿ ಪೂರ್ವ ಸಾಲ ಮರುವಾಪತಿ ಮಾಡಿದರೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ , ಎಲ್ಲ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ.  ಗೃಹ ಸಾಲ ಪಡೆದಿರುವ ಅವಧಿ ಕಡಿಮೆ ಇದ್ದಾಗ ಬಡ್ಡಿ ಪ್ರಮಾಣ ಹೇಗೆ ಕಡಿಮೆಯಾಗುತ್ತದೆ ಎನ್ನುವುದನ್ನು ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ, ಗಮನಿಸಿ.

ಸಾಲ ಪಡೆದ ಅವಧಿಗೆ ಅನುಗುಣವಾಗಿ ಹೆಚ್ಚುತ್ತೆ ಗೃಹ ಸಾಲದ ಬಡ್ಡಿ ದರ:
ಸಾಲದ ಮೊತ್ತ ಸಾಲದ ಮೇಲಿನ ಬಡ್ಡಿ ದರ ಸಾಲ ಪಡೆದಿರುವ ಅವಧಿ ಸಾಲಕ್ಕೆ ಕಟ್ಟುವ ಬಡ್ಡಿಯ ಪ್ರಮಾಣ ಅಸಲು ಬಡ್ಡಿ ಸೇರಿ ಕಟ್ಟುವ ಒಟ್ಟು ಹಣ
20 ಲಕ್ಷ ಶೇ 8.6 10 ವರ್ಷ ರೂ. 9,88,507 ರೂ. 29,88507
20 ಲಕ್ಷ ಶೇ 8.6 15ವರ್ಷ ರೂ.15,66,196 ರೂ. 35, 66196

What is your Credit Score? Get FREE Credit Score in 1 Minute!

Get Start Now!
CIBIL Meter
Get It now!
Attention!

This is to inform that Suvision Holdings Pvt Ltd ("IndianMoney.com") do not charge any fees/security deposit/advances towards outsourcing any of its activities. All stake holders are cautioned against any such fraud.